ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ

ಗೃಹ ಇಲಾಖೆ

wrappixel kit

ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ

ಪರಿಚಯ -
ನಮಗೆಲ್ಲಾ ತಿಳಿದ ಹಾಗೆ ರಾಷ್ಟ್ರಮಟ್ಟದಲ್ಲಿ ಸಂಭವಿಸುವ ವಿಪತ್ತುಗಳನ್ನು ನಿರ್ವಹಿಸಲು ಕೇಂದ್ರ ಸರ್ಕಾರದ ವಿಪತ್ತು ನಿರ್ವಹಣಾ ಕಾಯ್ದೆ-೨೦೦೫ ಆದೇಶದಂತೆ ರಾಷ್ಟ್ರೀಯ ವಿಪತ್ತು ಸಂದನಾ ಪಡೆಯು ಗೌರವಾನ್ವಿತ ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಚನೆಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ರಾಜ್ಯ ಮಟ್ಟದಲ್ಲಿ ಸಂಭವಿಸುವ ವಿಪತ್ತುಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಮಾನ್ಯ ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಸ್ಪಂದನಾ ಪಡೆಯನ್ನು ರಚಿಸುವುದು ಅವಶ್ಯಕವಾಗಿರುತ್ತದೆ.
 ಸ್ಥಾಪನೆ –
ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆಯು ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ ೧೮೩ ಕೆಎಫ್‌ಎಸ್ ೨೦೧೨ ದಿನಾಂಕ ೧೪-೦೬-೨೦೧೩ ಅನುಸಾರ ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿ ರಾಜ್ಯದ ಬೆಂಗಳೂರು, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ೦೪ ಘಟಕಗಳು ಪ್ರಾರಂಭಗೊಂಡವು. ೦೫ ನೇ ಘಟಕವಾಗಿ ಜೂನ್ ೨೦೨೨ ರಂದು ದಾವಣಗೆರೆಯಲ್ಲಿ ಆರಂಭಗೊಂಡಿತು.
 ರಚನೆ –
ಪ್ರಸ್ತುತ ರಾಜ್ಯದಲ್ಲಿ ವಿಪತ್ತು ಸ್ಪಂದನಾ ಪಡೆಯ ೦೫ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ಘಟಕದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ, ರಾಜ್ಯ ಕೈಗಾರಿಕ ಭದ್ರತಾ ಪಡೆ, ಆರೋಗ್ಯ ಇಲಾಖೆ ಮತ್ತು ರಾಜ್ಯ ಮೀಸಲು ಪೊಲೀಸ ಪಡೆಯನ್ನ ಒಳಗೊಂಡ ಒಟ್ಟು ೧೨೭ ನುರಿತ ಅಧಿಕಾರಿ ಸಿಬ್ಬಂದಿಯವರಿರುತ್ತಾರೆ. ಇವರಲ್ಲಿ ನುರಿತ ಅಗ್ನಿಶಾಮಕರು, ಚಾಲಕರು, ತಂತ್ರಜ್ಞರು, ಈಜು ಪಟುಗಳನ್ನು ಒಳಗೊಂಡ ಸಶಕ್ತ ಪಡೆಯನ್ನು ಹೊಂದಿದೆ.

ಮತ್ತಷ್ಟು ಓದಿ

×
ABOUT DULT ORGANISATIONAL STRUCTURE PROJECTS